ತೆನಾರ್ಡೈಟ್
ರಾಸಾಯನಿಕವಾಗಿ ಸೋಡಿಯಮ್ ಸಲ್ಫೇಟನ್ನು (NO2SO4) ಹೋಲುವ ಬಿಧುರ ಖನಿಜ. ಗಾಜಿನ ಹೊಳಪು, ಬಿಳಿಯ ಬಣ್ಣ, ಪಾರದರ್ಶಕದಿಂದ ಪಾಶ್ರ್ವಪಾರದರ್ಶಕತ್ವ ಇದರ ಗುಣಗಳು. ಇದರ ಕಾಠಿಣ್ಯಾಂಕ 2-3, ಸಾಪೇಕ್ಷಸಾಂದ್ರತೆ 2.68. ತೈನಾರ್ಡೈಟ್ ಆರ್ಥೊರಾಂಬಿಕ್ ವ್ಯವಸ್ಥೆಯಲ್ಲಿ ಸ್ಫಟಿಕೀಕರಿಸುತ್ತದೆ. ಚಪ್ಪಟೆಯಾಗಿ, ಕೆಲವೊಮ್ಮೆ ಅಡ್ಡ ಅವಳಿ ರೂಪ ಇರುವುದುಂಟು. ಇದು ನೀರಿನಲ್ಲಿ ಕರಗುವುದಲ್ಲದೆ ಸ್ಫಟಿಕರೂಪದಲ್ಲಿದ್ದಾಗ ನೀರನ್ನು ಹೀರಿ ಉಕ್ಕನ್ನು ಸೂಸುತ್ತದೆ. ಸಾಮಾನ್ಯವಾಗಿ ಲವಣ ಸರೋವರಗಳಲ್ಲಿ ಕಂಡುಬರುವ ತೆನಾರ್ಡೈಟ್ ಸ್ಫಟಿಕಗಳು ಬೇಸಿಗೆಯ ಕಾಲದಲ್ಲಿ ಬಾಷ್ಪೀಕರಣದಿಂದಾಗಿ ಸಂಗ್ರಹಿಸಲು ಯೋಗ್ಯವೆನಿಸುತ್ತವೆ. ಅಮೆರಿಕದ ಕ್ಯಾಲಿಫೋರ್ನಿಯಾದ ಬೋರಾಕ್ಸ್ ಸರೋವರ ಹಾಗೂ ನಿವೇದ ಬಳಿಯ ರೋಡ್ಸ್‍ಮಾರ್ಷ್‍ನಲ್ಲಿ ತೆನಾರ್ಡೈಟ್ ಹೇರಳವಾಗಿ ದೊರೆಯುತ್ತದೆ. ಅರಿಜೋನದ ರಯೋವೆರೆಡೆ ಪ್ರದೇಶದಲ್ಲಿ ಗಣನೀಯ ಪ್ರಮಾಣದ ತೆನಾರ್ಡೈಟ್ ನಿಕ್ಷೇಪ ಉಂಟು. ಸೋಡ ತಯಾರಿಕೆಯಲ್ಲಿ ಈ ಖನಿಜದ ಉಪಯೋಗ ಹೆಚ್ಚು.
(ಟಿ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ